ಬ್ನೇ ನೋಹ್ ಎಂದರೆ ಯಾರು?
ಬ್ನೇ ನೋಹ್ ಎಂದರೆ ನೋಹನ ಸಂತತಿ. ಯಹೂದಿ ಧಾರ್ಮಿಕ ನಿಯಮದಲ್ಲಿ ನೋಹನ ಏಳು ಆಜ್ಞೆಗಳಿಗೆ ಒಳಪಡುವ ಇತರ ಜನರನ್ನು ಈ ಹೆಸರಿನಿಂದ ಕರೆಯುತ್ತಾರೆ.
ಮೈಮೋನಿಡೀಸ್ ಪ್ರಕಾರ ಆದಾಮನಿಗೆ ಆರು ಆಜ್ಞೆಗಳು ದೊರೆತವು. ಜೀವಂತ ಪ್ರಾಣಿಯಿಂದ ತೆಗೆದ ಮಾಂಸವನ್ನು ತಿನ್ನಬಾರದೆಂಬ ಆಜ್ಞೆ ನೋಹನಿಗೆ ದೊರೆಯಿತು.
ಮಿಕ್ಕ ಆಜ್ಞೆಗಳು ವಿಗ್ರಹಾರಾಧನೆ, ಸೃಷ್ಟಿಕರ್ತನನ್ನು ಶಪಿಸುವುದು, ಕೊಲೆ, ನಿಷಿದ್ಧ ಲೈಂಗಿಕ ಸಂಬಂಧಗಳು, ಕಳವು ಮತ್ತು ನ್ಯಾಯಾಲಯಗಳ ಸ್ಥಾಪನೆ ಕುರಿತು ಇವೆ. ಯಹೂದಿ ಧರ್ಮಕ್ಕೆ ಸೇರದೇ ಸೃಷ್ಟಿಕರ್ತನ ಆಜ್ಞೆಗಳಾಗಿ ಅವುಗಳನ್ನು ಪಾಲಿಸಬಹುದು.